ಜನರನ್ನು ವಂಚಿಸಿ ಹಣ ಕೀಳುತ್ತಿದ್ದ ವಂಚಕಿ ಮೊಬೈಲ್ ಮಾಲಾ ಪೊಲೀಸರ ಅತಿಥಿಯಾಗಿದ್ದಾಳೆ. ತನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿ ಶ್ರೀಮಂತರನ್ನು ಪರಿಚಯಿಸಿಕೊಳ್ಳುತ್ತಿದ್ದ ಮಾಲಾ ಅವರಿಂದ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ನಂತರ ಅವರಿಗೆ ಮೊಬೈಲ್ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸುತ್ತಿದ್ದಳು ಎನ್ನಲಾಗಿದೆ. ಮಾಲಾಳ ಸೌಂದರ್ಯ ಸವಿಯುವ ಬಯಕೆಯಿಂದ ನಿರ್ಜನ ಪ್ರದೇಶಕ್ಕೆ ಬರುವ ಶ್ರೀಮಂತ ವ್ಯಕ್ತಿಯನ್ನು ಆಕೆಯ ಗೂಂಡಾಗಳು ಬೆದರಿಸಿ ಚೆಕ್ ಮೇಲೆ ಸಹಿಹಾಕಿಸಿಕೊಳ್ಳುತ್ತಿದ್ದರು. ನಂತರ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಬ್ಯಾಂಕ್ನಿಂದ ಹಣ