ಬೆಂಗಳೂರು- ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರ ಪಟ್ಟಿಯಲ್ಲಿ ಸುಮಾರು 22 ಸಾವಿರ ಮತದಾರರ ಹೆಸರು ನಾಪತ್ತೆ ಆಗಿರುವ ಬಗ್ಗೆ ಪರಿಶೀಲನೆ ನಡೆಸಲು ಎಂದು ಆನೇಕಲ್ ಪಟ್ಟಣಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ದಯಾನಂದ್ ರವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.