ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತ ಹುತ್ತಕ್ಕೆ ಎರೆಯುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ಕೋಳಿಯ ರಕ್ತ ಹಾಗೂ ಮೊಟ್ಟೆ ಎರೆಯುವ ಮೂಲಕ ಷಷ್ಠಿ ಆಚರಿಸಲಾಯಿತು. ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡುವುದರ ಮೂಲಕ ನಾಗಪ್ಪನಿಗೆ ನಮಿಸಿ, ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲಾಯಿತು. ಈ ಭಾಗದ ಗ್ರಾಮಸ್ಥರು ಬಹುತೇಕ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು, ಮೊಟ್ಟೆಯನ್ನು ನಾಗಪ್ಪನಿಗೆ ಸಮರ್ಪಿಸಿದರು.ಇನ್ನೂ ಈ