ಕೇರಳ ರಾಜ್ಯದಿಂದ ಲಾರಿಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದರಿಂದ ಹಲವು ಅನುಮಾನಗಳು ಜನರನ್ನು ಕಾಡಲಾರಂಭಿಸಿದೆ. ಪದೇ ಪದೇ ಕೋಳಿ ತ್ಯಾಜ್ಯವನ್ನು ಲಾರಿಗಟ್ಟಲೇ ತಂದು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ರೋಸಿ ಹೋಗಿರುವ ಸ್ಥಳೀಯರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರೆಂಜ ಎಂಬಲ್ಲಿ ಲಾರಿ ಯೊಂದರಲ್ಲಿ ತುಂಬಿಸಿ ತಂದಿದ್ದ ಕೋಳಿ ತಾಜ್ಯವನ್ನು ಅಪರಿಚಿತ ವ್ಯಕ್ತಿಗಳು ರಸ್ತೆ ಬದಿ ಎಸೆದು ಹೋಗಿದ್ದು ನಾಗರಿಕರಲ್ಲಿ