ಪೊಲೀಸ್ ಇಲಾಖೆಯ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯನವರು ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಆರಂಭಿಸುವ ಮೂಲಕ ಅಪಹಾಸ್ಯಕ್ಕಿಡಾದರು. ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಕೊನೆಗೆ ಹೆಸರನ್ನೆ ಹೇಳದೆ ಕೇವಲ ರಾಜ್ಯಪಾಲರೇ ಎಂದು ಭಾಷಣ ಮುಂದುವರೆಸಿ, ಕೂಡಲೇ ಇನ್ವೆಟೇಷನ್ ಕೊಡ್ರಿ ಎಂದು ಮಾತು ಮರೆಸಿದರು.