ರೈತನಿಂದ ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಯಿಂದ ರೈತರು ಲಂಚದ ಹಣ ಕಕ್ಕಿಸಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಮಳೆ ಇಲ್ಲದೆ, ಬೆಳೆ ಇಲ್ಲದೆ ರೈತರ ಸಂಕಷ್ಟದಲ್ಲಿದ್ದರೆ ಹೆಸ್ಕಾ ಸೆಕ್ಷನ್ ಆಫೀಸರ್ ರಾಜು ಗಬ್ಬೂರು ಎಂಬಾತ ಟ್ರಾನ್ಸ್`ಫಾರ್ಮರ್ ಬದಲಾವಣೆಗೆ ರೈತನೊಬ್ಬನಿಂದ 6000 ರೂ. ಲಂಚ ಪಡೆದಿದ್ದ. ಅಧಿಕಾರಿಯ ಲಂಚಾವತಾರ ಕಂಡು ರೋಸಿಹೋಗಿದ್ದ ರೈತರು ಲಂಚಾವತಾರ ವಿಡಿಯೋ ಮಾಡಿದ್ದರು.ಇದೀಗ, ಪೊಲೀಸರ ಸಮ್ಮುಖದಲ್ಲಿ ವಿಡಿಯೋ ಬಹಿರಂಗಪಡಿಸಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ.