ಮಗುವೊಂದು ಆಟವಾಡುತ್ತಾ ಹೋಗಿ, ಕಾಲು ಜಾರಿ ಕಾಲುವೆಗೆ ಬಿದ್ದು ಬಾರದ ಲೋಕಕ್ಕೆ ಪಯಣ ಬೆಳೆಸಿದೆ.ಮಗುವೊಂದು ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ಸಮೀಪದ ತೊಂಡಿಹಾಳ ಯರಮ್ಮನಕ್ಯಾಂಪ್ ನಲ್ಲಿ ನಡೆದಿದೆ.ಸಣ್ಣ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ದುಡಿದು ಜೀವನ ಸಾಗಿಸುತ್ತಿರುವ 10ಕ್ಕೂ ಅಧಿಕ ಕುಟುಂಬಗಳು ಹುಳ್ಕಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ತೊಂಡಿಹಾಳ ಮತ್ತು ಹುಳ್ಕಿಹಾಳ ಮಧ್ಯೆ ಹರಿಯುವ ಹಳ್ಳದ ದಡದಲ್ಲಿ ವಾಸವಾಗಿದ್ದಾರೆ. ದುಡಿಮೆಯೇ ಮೂಲವಾಗಿದ್ದರಿಂದ ಮಕ್ಕಳನ್ನು ಬಿಟ್ಟು