ರಾಜ್ಯದಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗರಗನಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ ಶಾಲೆಗೆ ಹೋಗಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಪಾಯಕ್ಕೆ ಅಹ್ವಾನ ನೀಡುವ ರಾಷ್ಟ್ರೀಯ ಹೆದ್ದಾರಿಯನ್ನ ದಾಟಿ ಶಾಲೆಗೆ ಸೇರಬೇಕಾದ ಪರಿಸ್ಥಿತಿ ಈ ಗ್ರಾಮದ ಮಕ್ಕಳಿಗಿದೆ.1 ರಿಂದ 5 ನೇ ತರಗತಿವರೆಗೆ ಗರಗನಹಳ್ಳಿ ಶಾಲೆಯಲ್ಲಿ ಓದಿ ನಂತ್ರದ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಅಗತಗೌಡನಹಳ್ಳಿ ಗ್ರಾಮದ ಶಾಲೆಗೆ ಹೋಗಬೇಕಾಗಿದೆ.ಆ ಶಾಲೆಯ ಮಾರ್ಗ ಮಧ್ಯದ ರಾಷ್ಟ್ರೀಯ ಹೆದ್ದಾರಿ 212 ದಾಟಿ ಶಾಲೆಗೆ ಹೋಗಲು ಹರಸಾಹಾಸ