ಮಕ್ಕಳು ಟೈಮ್ಪಾಸ್ಗಾಗಿ ವೀಡಿಯೊ ಗೇಮ್ಗಳನ್ನು ಆಡಿದರೆ ಪರವಾಗಿಲ್ಲ. ಈಗ ಮಕ್ಕಳೆಲ್ಲಾ ಓದು- ಆಟದ ಕಡೆಗೆ ಹೆಚ್ಚಿನ ಗಮನಹರಿಸದೆ ಯಾವಾಗಲೂ ಮೊಬೈಲ್ಗೆ ದಾಸನಾಗಿರುತ್ತಾರೆ. ಆಡಬೇಡಿ ಎಂದು ಎಷ್ಟೇ ಹೇಳಿದರೂ ಅವರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಜೋರಾಗಿ ಬೈದರೆ ಊಟ-ತಿಂಡಿ ಬಿಡುವುದು ಹೀಗೆ ಮೊಬೈಲ್ ಗೇಮ್ಗಳ ಹುಚ್ಚು ಹಿಡಿದು ಪೋಷಕರಿಗೆ ಅವರನ್ನು ಹತೋಟಿಯಲ್ಲಿಡುವುದು ತುಂಬಾ ಕಷ್ಟವಾಗಿ ಹೋಗಿದೆ. ಹೀಗಿರುವಾಗ ಪಬ್ಜೀ ಗೇಮ್ ಹೇಳತೀರದು, ಆಡುವಾಗ ಯಾರಾದರೂ ಕರೆದರೆ ಕೇಳಿಸಿಕೊಳ್ಳುವುದೇ ಇಲ್ಲ ಅದರಲ್ಲಿಯೇ ಮಗ್ನರಾಗಿಬಿಟ್ಟಿರುತ್ತಾರೆ.