ಮೇ 12 ರಂದು ವಿಧಾನಸಭೆ ಚುನಾವಣೆನಡೆಯಲಿದೆ. ಈ ಹಿನ್ನಲೆ ಮಕ್ಕಳನ್ನು ಬಿಜೆಪಿ ಪ್ರಚಾರಕ್ಕೆ ರಂಗಾಯಣ ನಿರ್ದೇಶಕ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಕಲಬುರ್ಗಿ ರಂಗಾಯಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ಚಿಣ್ಣರ ಮೇಳದಲ್ಲಿ ಮಕ್ಕಳಿಂದ ಬಿಜೆಪಿ ಪರ ಪ್ರಚಾರ ನಡೆಸಲಾಗಿದೆ. ಬಿಜೆಪಿಕೋ ಓಟ್ ಹಾಕಿ ಅಂತ ಮಕ್ಕಳಿಂದ ರಂಗದ ಮೇಲೆ ಹೇಳಿಸಿದ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳು ಬಿಜೆಪಿಗೆ ಓಟ್ ಹಾಕಿ ಅಂತಾ ಹೇಳಿರುವ ವಿಡಿಯೋ