ರಾಜ್ಯದಲ್ಲಿ ಸಂಚಲನ ಸೃಷ್ಠಿಸಿರುವ ಫೋನ್ ಟ್ಯಾಪಿಂಗ್ ಇನ್ನಷ್ಟು ಸ್ವಾಮೀಜಿಗಳನ್ನು ಸುತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಫೋನ್ ಟ್ಯಾಪಿಂಗ್ ಚಿತ್ರದುರ್ಗಕ್ಕೂ ವ್ಯಾಪಿಸಿದೆಯಾ ಅನ್ನೋ ಪಿಸು ಮಾತುಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ.ಮಾದರ ಗುರುಪೀಠದ ಮಾದರ ಚನ್ನಯ್ಯ ಸ್ವಾಮೀಜಿ ಅವರ ಫೋನ್ ನ್ನು ಕದ್ದಾಲಿಸಲಾಗಿತ್ತು ಎನ್ನೋ ಅನುಮಾನ ವ್ಯಕ್ತವಾಗತೊಡಗಿದೆ.ಕಳೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆ ವೇಳೆ ಮಾದರ ಚನ್ನಯ್ಯ ಸ್ವಾಮೀಜಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರು ಎನ್ನಲಾಗಿದೆ.ರಾಜ್ಯವ್ಯಾಪ್ತಿ ತಮ್ಮ ಜನಾಂಗದವರು ಬಿಜೆಪಿಗೆ ಸಹಕರಿಸುವಂತೆ ತೆರೆಮರೆಯಲ್ಲಿ ಕಲಸ ಮಾಡಿದ್ದರು.