ಚೌಕಿದಾರ್ ಅಬ್ ಚೋರ್ ಹೈ ಎಂದವರಾರು?

ಕಲಬುರಗಿ, ಮಂಗಳವಾರ, 19 ಮಾರ್ಚ್ 2019 (14:14 IST)

ಸುಳ್ಳಿನ ಸರದಾರ ಯಾರಾದರೂ ಪ್ರಧಾನಿಯಾಗಿದ್ರೆ ಅದು ನರೇಂದ್ರ ಮೋದಿ. ಜೂಟ್ ಕಾ ರಾಜಾ, ಜೂಟ್ ಕಾ ಸರ್ದಾರ್ ಏ ನರೇಂದ್ರ ಮೋದಿ ಕಾಂಗ್ರೆಸ್ ವಾಲೋ ಕೀ ಬಾತ್ ಕರತಾ ಹೈ. ಹೀಗಂತ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಒಂದೆಡೆ ಸುಳ್ಳಿನ ಸರದಾರ‌ ಮೋದಿ ಇದ್ದಾರೆ, ಮತ್ತೊಂದೆಡೆ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಕಲಬುರಗಿಗೆ ಆಗಮಿಸಿದ ಸುಳ್ಳಿನ ಸರದಾರ ಮೋದಿ, ದೇಶದಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ನವದೆಹಲಿಯಲ್ಲಿ ದಿನಕ್ಕೆ ಆರು ಮಹಿಳೆಯರ ಮೇಲೆ ಅತ್ಯಾಚಾರ ನಡೀತಿದೆ. ಇಲ್ಲಿ ಬಂದು ಹಮ್ ಸಬ್ ಚೋರೋ ಕಾ ದುಖಾನ್ ಬಂದ್ ಕರ್ ದೇತಾ ಹುಂ ಎಂದ್ರು. ಆದರೆ ಕಳ್ಳನ ಕೈಯಲ್ಲಿ ಬೀಗದ ಕೈ ಕೊಟ್ಟ ಹಾಗಾಗಿದೆ ಎಂದು ವ್ಯಂಗ್ಯವಾಡಿದ್ರು.

ಜಬ್ ಚೌಕೀದಾರ್ ಚೋರ್ ಹೋತಾ ಹೈ ತೋ ಕ್ಯಾ ಹೋತಾ ಹೈ? ಎಂದ ಅವರು, ಈಗ ಚೌಕೀದಾರ್ ಚೋರ್ ಹೈ ಹೊಸ ಸ್ಲೋಗನ್ ಆಗಿದೆ  ಎಂದರು.

ಐದು ವರ್ಷಗಳಲ್ಲಿ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಗಾಂಧಿ ಸಿದ್ಧಾಂತ ಬೇಕಾದ್ರೆ ಮಲ್ಲಿಕಾರ್ಜುನ ಖರ್ಗೆರವರಿಗೆ ಮತಹಾಕಿ. ಭಾರತ ದೇಶದ ಮೊದಲ ಉಗ್ರ ಗೋಡ್ಸೆ ಸಿದ್ಧಾಂತ ಬೇಕಾದ್ರೆ ಮೋದಿಗೆ ಮತಹಾಕಿ ಆಯ್ಕೆ ನಿಮ್ದು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ರು.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎ.ಕೃಷ್ಣಪ್ಪರನ್ನು ಜೆಡಿಎಸ್ ನವರೇ ಕೊಂದ್ರು ಎಂದ ಬಿಜೆಪಿ ಮುಖಂಡ

ಕಳೆದ ಲೋಕಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಎ.ಕೃಷ್ಣಪ್ಪರನ್ನು ಜನತಾ ದಳದ ಮುಖಂಡರೇ ಅನ್ಯಾಯ ವಾಗಿ ...

news

ಸುಮಲತಾ ಬಗ್ಗೆ ನಿಖಿಲ್ ಹೇಳಿದ್ದೇನು?

ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ನಮ್ಮ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾರದಾಂಬೆಗೆ ಪೂಜೆ ...

news

ಲಕ್ಷಾಂತರ ಮೌಲ್ಯದ ಗಾಂಜಾ ಎಲ್ಲಿ ಸಿಕ್ತು?

ಅಕ್ರಮವಾಗಿ ಸಾಗಿಸುತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.

news

ಅಳಿಯ - ಮಾವನ ಮಧ್ಯೆ ನೇರ ಹಣಾಹಣಿ ಈ ಕ್ಷೇತ್ರದಲ್ಲಿದೆ…

ಲೋಕಸಭೆ ಚುನಾವಣೆ ಹಿನ್ನಲೆ ಈ ಕ್ಷೇತ್ರದಲ್ಲಿ ಅಳಿಯ ಹಾಗೂ ಮಾವನ ನಡುವ ನೇರ ಪೈಪೋಟಿ ನಡೆಯುವ ಲಕ್ಷಣಗಳು ...