ಬೆಂಗಳೂರು : ಮೈತ್ರಿ ಸರ್ಕಾರದ ವಿರುದ್ಧ ಟ್ವೀಟರ್ ನಲ್ಲಿ ಹರಿಹಾಯ್ದ ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಶೋಭಾ ಕರಂದ್ಲಾಜೆ, 78ಕ್ಕಿಂತ 105 ದೊಡ್ಡದು. ರಾಜ್ಯದ ಜನತೆ ಬಿಜೆಪಿ ಪರ ತೀರ್ಪು ಕೊಟ್ಟರೂ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯಿಂದ ಸರ್ಕಾರ ರಚಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಕಾಮನ್ಸೆನ್ಸ್ ಇಲ್ಲವಾಯಿತೆ? ಆರಂಭದಿಂದಲೇ ಶಾಸಕರ ಗುಂಪು ಮಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಿ. ನಿಮ್ಮ ನೀಚ್ ಪಾಲಿಟಿಕ್ಸ್ ಬಿಟ್ಟು