ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.. ವಿಧಾನಸಭೆಯ ಸೋಲಿನ ನಂತ್ರ ನಾಯಕರು ಒಳಗೊಳಗೆ ಕತ್ತಿಮಸೆಯೋಕೆ ಶುರುಮಾಡಿದ್ದಾರೆ.. ಸಂಸದ ಪ್ರತಾಪ್ ಸಿಂಹ ಹೊಡೆದ ಮಾತಿನ ಗುಂಡು ಮಾಜಿ ಸಿಎಂ ಬಿಎಸ್ ವೈ ಹಾಗೂ ಅವರ ಶಿಷ್ಯ ಬೊಮ್ಮಾಯಿಯವರ ಎದೆಗೆ ಬಿದ್ದಿದೆ.. ಹೀಗಾಗಿ ಲಿಂಗಾಯತ ವರ್ಸಸ್ ಸಂಘಪರಿವಾರ ಎಂಬ ಹೊಸ ಬೀಜ ಕಾದಟ ಆರಂಭವಾಗಿದೆ.. ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಸೋಲಾಯ್ತು ಅನ್ನೋದನ್ನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ತಲೆಗೆ ಕಟ್ಟೋಕೆ ಸಂತೋಷ್ ಬಣ ಪ್ರಯತ್ನ ನಡೆಸಿದೆ.. ಹಾಗಾಗಿಯೇ ಅದಕ್ಕೆ ಪ್ರತಾಪ್ ಸಿಂಹ,ಸಿ.ಟಿ.ರವಿಯಂತವರನ್ನ ಬಳಸಿಕೊಳ್ಳಲಾಗ್ತಿದೆ ಎಂಬ ಚರ್ಚೆಗಳು ಶುರುವಾಗಿವೆ.. ಹಾಗಾಗಿ ಬಿಎಸ್ ವೈ ಬಣ ಇದೀಗ ತಿರುಗಿಬಿದ್ದಿದೆ.