ಬಸ್ ನಲ್ಲಿ ಯುವತಿಗೆ ಕಿರುಕುಳ ಕೊಟ್ಟ ಕ್ಲೀನರ್; ಆದರೆ ಪೆಟ್ಟು ತಿಂದಿದ್ದು ಯಾರು ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 19 ಜನವರಿ 2019 (06:38 IST)
ಬೆಂಗಳೂರು : ಖಾಸಗಿ ಬಸ್‍ನ ಕ್ಲೀನರ್ ಪ್ರಯಾಣದ ವೇಳೆ ಮಲಗಿದ್ದ ಯುವತಿಗೆ ಕಿರುಕುಳ ಕೊಟ್ಟಿದ್ದಕ್ಕೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಎಕ್ಸಾಂ ಬರೆದು ಹಿಂತಿರುಗುತ್ತಿದ್ದ ಯುವತಿಯೊಬ್ಬಳು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ವಿಜಯಲಕ್ಷ್ಮೀ ಟ್ರಾವೆಲ್ಸ್ ಬಸ್ ನಲ್ಲಿ ರಾತ್ರಿ ವೇಳೆ ಪ್ರಯಾಣಿಸಿದ್ದಾಳೆ. ಆ ವೇಳೆ ಮಲಗಿದ್ದ ಈಕೆಗೆ ಕ್ಲೀನರ್ ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ.
ಆಗ ಯುವತಿ ಜೋರಾಗಿ ಕಿರುಚಿಕೊಂಡ ಕಾರಣ ಆತ ಅಲ್ಲಿಂದ ಓಡಿ ಹೋಗಿದ್ದಾನೆ.


ಈ ಘಟನೆ ಬಳಿಕ ಯುವತಿ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮರುದಿನ ಯುವತಿ ಕಡೆಯವರು ಬಸ್ ನ್ನು ತಡೆದು ಅಲ್ಲಿದ್ದ ಚಾಲಕನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಕ್ಲೀನರ್ ಬಿಟ್ಟು ತನ್ನ ಮೇಲೆ ಹಲ್ಲೆ ಮಾಡಿದಕ್ಕೆ ಚಾಲಕ
ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಹಾಗೇ ಯುವತಿ ಕೂಡ ಕ್ಲೀನರ್ ವಿರುದ್ಧ ದೂರು ನೀಡಿದ್ದಾಳೆ. ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಕ್ಲೀನರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :