ಸಿಎಂ ಆದ ಖುಷಿಗೆ ಪುನೀತ್ ಹಾಡಿಗೆ ಹೆಜ್ಜೆ ಹಾಕಿದ ಬಸವರಾಜ ಬೊಮ್ಮಾಯಿ

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (10:09 IST)
ಬೆಂಗಳೂರು: ನೂತನವಾಗಿ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್ ತಮ್ಮ ಹೆಸರನ್ನು ಘೋಷಣೆ ಮಾಡಿದ ಖುಷಿಯಲ್ಲಿ ಬಸವರಾಜ ಬೊಮ್ಮಾಯಿ ಕುಟುಂಬಸ್ಥರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  
> ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡಿಗೆ ಕುಟುಂಬಸ್ಥರೊಂದಿಗೆ ಹೆಜ್ಜೆ ಹಾಕಿ ಸಿಎಂ ಬೊಮ್ಮಾಯಿ ಖುಷಿಪಟ್ಟ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.>   ಪತ್ನಿ ಜೊತೆ ಕುಳಿತು ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ಮೊನ್ನೆ ರಾತ್ರಿ ಈ ಹಾಡನ್ನು ಕೇಳಿ ಎಂಜಾಯ್ ಮಾಡುತ್ತಿರುವ ಕ್ಷಣಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :