ಜನಪ್ರತಿನಿಧಿಯಾದವರು ಕೇವಲ ಮಾತನಾಡಿ ಬಿಡುವುದು ಅಲ್ಲಾ. ನುಡಿದಂತೆ ನಡೆದು ತೋರಿಸುವುದು ನಿಜವಾದ ಜನ ನಾಯಕನಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನುಡಿದಂತೆ ನಡೆದ ನಾಯಕರಾಗಿದ್ದಾರೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗಜಾನನ ಅಣ್ವೇಕರ್ ಹೇಳಿದರು.ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಬುಡರಸಿಂಗಿ ಸಮೀಪದ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆದುಹಾಕುವುದರ ಮೂಲಕ ವಿನೂತನವಾಗಿ ಹುಟ್ಟು ಹಬ್ಬ ಆಚರಣೆಗೆ ಚಾಲನೆ