ಬೆಂಗಳೂರನ್ನು ಕೆಲವರು ಸಿಂಗಾಪೂರ್ ಮಾಡಲು ಹೊರಟಿದ್ದರು. ಆದ್ರೆ ಅದು ಆಗಲಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಕೆಲವರು ಹಿಂದೆ ಬೆಂಗಳೂರು ನಗರವನ್ನು ಸಿಂಗಾಪೂರ್ ನಗರವನ್ನಾಗಿಸುವ ಕನಸು ತೋರಿಸಿದ್ದರು. ಆದರೆ, ಬೆಂಗಳೂರು ಸಿಂಗಾಪೂರ್ ಆಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಪೌರ ಕಾರ್ಮಿಕರ ಸಿಂಗಾಪೂರ್ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ಸಿಂಗಾಪೂರ್ಗೆ ತೆರಳಿ ಪ್ರತ್ಯಕ್ಷ ಅನುಭವ ಪಡೆಯಲಿ ಎನ್ನುವ ಉದ್ದೇಶದಿಂದ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.