ಒಂದೆಡೆ ನೆರೆ ಪ್ರವಾಹದಿಂದ ತಮ್ಮ ಬದುಕನ್ನೇ ಕಳೆದುಕೊಂಡಿದ್ದ ಜನರು ಇದೀಗ ರಾಜ್ಯದ ಮುಖ್ಯಮಂತ್ರಿಯ ಮಾತಿನಿಂದ ಇನ್ನೊಂದೆಡೆ ಕುಗ್ಗಿ ಹೋಗುವ ಪರಿಸ್ಥಿತಿಗೆ ಬಂದಿದ್ದಾರೆ.ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿದ ಕೃಷ್ಣಾ ನದಿ ತೀರದ ಗೌಡುರು ಗ್ರಾಮಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ರು. ಸಂತ್ರಸ್ತರ ಗೋಳು ಆಲಿಸಿದ ಸಿಎಂ ಬಿಎಸ್ ವೈ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೌಡುರು ಗ್ರಾಮದ ಜನರ ಮನವಿ ಕೇಳಿದ್ರು.ಕೃಷ್ಣಾ ನದಿ ಪ್ರವಾಹದಿಂದ ಪದೇ ಪದೇ ನರಕಯಾತನೆಯಲ್ಲೇ ಜೀವನ ನಡೆಸುತ್ತಿದ್ದೇವೆ.