Widgets Magazine

ಈ ಕಾರಣಕ್ಕೆ ವಿಜಯಪುರ ಜಿಲ್ಲಾ ಪ್ರವಾಸ ರದ್ದು ಮಾಡಿದ ಸಿಎಂ

ಬೆಂಗಳೂರು| pavithra| Last Modified ಗುರುವಾರ, 16 ಜನವರಿ 2020 (09:50 IST)
ಬೆಂಗಳೂರು : ರಾಜ್ಯಕ್ಕೆ ನಾಳೆ ಅಮಿತ್ ಶಾ ಭೇಟಿ ಹಿನ್ನಲೆ ವಿಜಯಪುರ ಜಿಲ್ಲಾ ರದ್ದು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಸಿಎಂ ಯಡಿಯೂರಪ್ಪ ಇಂದು ಸಂಜೆ ವಿಜಯಪುರಕ್ಕೆ ತೆರಳಿ ನಾಳೆ ವಾಪಾಸಾಗಬೇಕಿತ್ತು. ಆದ್ರೆ ನಾಳೆ ರಾಜ್ಯಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಆಗಮಿಸಲಿದ್ದು,  ಅವರು ಎಷ್ಟು ಗಂಟೆಗೆ ಬರುತ್ತಾರೆಂಬ ಮಾಹಿತಿ ಇಲ್ಲವಾದ್ದರಿಂದ  ಶಾ ಬಂದಾಗ ಭೇಟಿಗೆ ಕಾಲಾವಕಾಶ ಸಿಗದಿದ್ದರೆ ತೊಂದರೆಯಾಗುತ್ತದೆ, ಸಂಪುಟ ವಿಸ್ತರಣೆ, ಇತರ ವಿಚಾರಗಳ ಬಗ್ಗೆ ಚರ್ಚೆಗೆ ಸಮಸ್ಯೆಯಾಗುತ್ತದೆ.


ಚರ್ಚೆಗೆ ಅವಕಾಶ ಸಿಗದಿದ್ದರೆ ಮತ್ತೆ ಒಂದುವಾರ ಕಾಯಬೇಕಾದ ಅನಿವಾರ್ಯತೆ ಎದುರಾದರೆ ಎಂಬ ಕಾರಣಕ್ಕೆ ಸಿಎಂ ವಿಜಯಪುರ ಜಿಲ್ಲಾ ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :