ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು, ಎಲ್ಲೆಡೆ ಚುನಾವಣೆ ಕಾವು ಜೋರಾಗಿದೆ. ಪ್ರತಿಯೊಬ್ಬರು ಕೂಡ ಸಿಎಂ ಆಗಬೇಕೆಂದು ಇಂಗಿತ ವ್ಯಕ್ತಪಡಿಸುತ್ತಿದ್ದು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಸಿಎಂ ಆಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಪರಮೇಶ್ವರ್ ಸಿಎಂ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದು, ಪರಮೇಶ್ವರ್ ಸಿಎಂ ಹುದ್ದೆ ಕೇಳೋದ್ರಲ್ಲಿ ತಪ್ಪೇನಿದೆ. ಸಂಪೂರ್ಣವಾಗಿ ಅಧಿಕಾರಕ್ಕೆ ಬರ್ತೀವಿ ಅಂತಾ ನಮಗೆ ವಿಶ್ವಾಸ ಇದೆ. ಹತ್ತಲ್ಲ ಹದಿನೈದು ಜನ ಸಿಎಂ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಇದ್ದೀವಿ.