ಮತ್ತೆ ಮಾಧ್ಯಮಗಳ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ. ಸಾಲಮನ್ನಾ ವಿಷಯದಲ್ಲಿ ಮಾಧ್ಯಮಗಳಲ್ಲಿ ಕೆಲವು ಗೊಂದಲ ಸುದ್ದಿಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಮಂಡ್ಯದ ದುದ್ದ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಾಲಮನ್ನಾ ವಿಷಯದಲ್ಲಿ ಮಾಧ್ಯಮಗಳಲ್ಲಿ ಕೆಲ ಗೊಂದಲ ಸುದ್ದಿಗಳು ಬರುತ್ತಿವೆ. ಬಿಜೆಪಿ ನಾಯಕರು ಸಾಲಮನ್ನಾ ವಿಷಯದಲ್ಲಿ ಬುರುಡೆ ಭಾಷಣ ಮಾಡ್ತಿದ್ದಾರೆ. ಇದರಿಂದ ಜನರನ್ನು ಚಿಂತೆಗೀಡು ಮಾಡುವಂತೆ ಆಗಿದೆ ಎಂದರು. ಮಂಡ್ಯದಲ್ಲಿ ಸಿಎಂಗೆ ಆತ್ಮಹತ್ಯೆ ಸ್ವಾಗತ ಎಂದು