ಬೆಂಗಳೂರು: ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ವಾಚಮಗೋಚರವಾಗಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಬರೀ ಮಾತಾಡ್ತಾರೆ, ಕೆಲಸ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಭಾಷಣ ಮಾಡಿದ ಸಿಎಂ ಇಬ್ರಾಹಿಂ ಮನಮೋಹನ್ ಸಿಂಗ್ ಮಾತಾಡ್ತಿರಲಿಲ್ಲ, ಆದರೆ ಕೆಲಸ ಮಾಡ್ತಿದ್ದರು. ಆದರೆ ಈ ಮುಂಡೇದು ಮೋದಿ ಬರೀ ಮಾತಾಡುತ್ತೆ, ಕೆಲಸ ಮಾಡಲ್ಲ ಎಂದಿದ್ದಾರೆ.ಮೋದಿ ಮಾತಾಡುವಾಗಲೆಲ್ಲಾ ಅಚ್ಚೇ ದಿನ್ ಆಯೇಗಾ ಅಂತಾರೆ. ಎಲ್ಲಿ ಅಚ್ಚೇ ದಿನ್? ಬರೀ ಖಾಲಿ ದಿನ್.