ಬಾಗಲಕೋಟೆ : ಬಿಜೆಪಿ ನಾಯಕರು ತಮಗೆ ವೋಟು ಕೇಳಿವ ಬದಲು ಮೋದಿಗೆ ವೋಟ್ ಹಾಕಿ ಎಂದು ಹೇಳಿತ್ತಿರುವುದಕ್ಕೆ ಇದೀಗ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವಾಚ್ಯ ಪದ ಬಳಕೆ ಮಾಡುವ ಮೂಲಕ ಬಿಜೆಪಿ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ. ಬಾದಾಮಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೇಳ್ತಾರೆ ಗದ್ದಿಗೌಡರನ್ನ ನೋಡಬೇಡಿ, ಮೋದಿ ನೋಡಿ ವೋಟ್ ಹಾಕಿ ಅಂತಾ. ಹೆಣ್ಣು ಕೊಡಬೇಕಾದರೇ ಹುಡುಗನ್ನ ನೋಡ್ತಾರ, ಇಲ್ಲ ಅವರ ಅಪ್ಪನ ನೋಡ್ತಾರ?