ಮೆಟ್ರೋ ಕ್ಯಾಸ್ಟ್ ಉದ್ಘಾಟಿಸಿದ ಸಿಎಂ

ಬೆಂಗಳೂರು| geetha| Last Modified ಗುರುವಾರ, 25 ನವೆಂಬರ್ 2021 (18:07 IST)
ಮೆಟ್ರೋ ಕಾಸ್ಟ್ ಮೂರು ದಶಕಗಳಿಗಿಂತ ಹೆಚ್ಚು ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೇಬಲ್ ಸೇವೆ ಒದಗಿಸುತ್ತಿದೆ. ಇನ್ಮುಂದೆ ಬೆಂಗಳೂರಿನಿಂದಲೇ ಎಲ್ಲಾ ಕಡೆಗೂ ಸೇವೆ ಒದಗಿಸಲು ಮೆಟ್ರೋ ಕಾಸ್ಟ್ ಮುಂದಾಗಿದೆ. ಬೆಂಗಳೂರಿನಲ್ಲೇ ಸರ್ವರ್ ರೂಂ ಸ್ಥಾಪಿಸಿ ಸೇವೆ ನೀಡಲು ಸಂಸ್ಥೆ ಮುಂದಾಗಿದ್ದು, ಈಗಾಗಲೇ 5 ಲಕ್ಷ ಗ್ರಾಹಕರನ್ನು ಹೊಂದಿದೆ. ಇನ್ಮುಂದೆ ಕರ್ನಾಟಕದಲ್ಲಿ 1000 ಚಾನೆಲ್ ಗಳನ್ನು ನೀಡುವ ಯೋಜನೆಯನ್ನೂ ರೂಪಿಸಿದ್ದು, 1000 ಚಾನೆಲ್ ಗಳ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುವ ಗುರಿ ಇಟ್ಟುಕೊಂಡಿದೆ.OTT ಸರ್ವೀಸ್, IPTV ಸರ್ವೀಸ್, ಬ್ರಾಂಡ್ ಬ್ಯಾಂಡ್ ಸೇವೆಗಳನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ಸಂಸ್ಥೆ ತೀರ್ಮಾನ ಮಾಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೆಟ್ರೋ ಕಾಸ್ಟ್ ನೆಟ್ ವರ್ಕ್ ಇಂಡಿಯಾ ಪ್ರೈ. ಲಿಮಿಟೆಡ್‍ನ ಸಂಸ್ಥಾಪಕರಾದ ನಾಗೇಶ್ ಛಾಬ್ರಿಯಾ, ನಿಶಾ ಛಾಬ್ರಿಯಾ ಇನ್ನಿತರ ಗಣ್ಯರು ಭಾಗವಹಿಸಿದ್ದರು.


ಇದರಲ್ಲಿ ಇನ್ನಷ್ಟು ಓದಿ :