ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಗ್ಗೆ ಸಿಎಂ ಕುಮಾರಸ್ವಾಮಿ ನಿರ್ಲಕ್ಷ ಧೋರಣೆ ತಾಳಿದ್ದಾರೆಂದು ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅವರ ಹುಬ್ಬಳ್ಳಿಯ ಮನೆಯನ್ನು ಮಾರಾಟ ಮಾಡಲು ಮಾಲಿಕರು ನಿರ್ಧರಿಸಿದ್ದಾರೆ.ಉತ್ತರ ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗುವಂತೆ ಎರಡು ವರ್ಷಗಳ ಹಿಂದೆ ಶಾಸಕ ಬಸವರಾಜ ರಾಯರೆಡ್ಡಿ ಸೋದರ ಸುರೇಶ್ ರಾಯರೆಡ್ಡಿ ಅವರ ಮನೆಯನ್ನು ಸಿಎಂ ಕುಮಾರಸ್ವಾಮಿ ಬಾಡಿಗೆಗೆ ಪಡೆದಿದ್ದರು.ಆದರೆ ಇಲ್ಲಿ ಕುಮಾರಸ್ವಾಮಿ ಒಮ್ಮೆಯೂ ವಾಸ್ತವ್ಯ ಹೂಡಿಲ್ಲ. ಯಾರೂ ವಾಸ್ತವ್ಯ ಹೂಡದೇ ಪಾಳು ಬಿದ್ದಂತೆ ಮನೆ