ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ಮಂಡಿಸುತ್ತಿದ್ದು, ರಾಜಧಾನಿ ಬೆಂಗಳೂರಿಗೆ ಕೆಲವು ಕೊಡುಗೆಗಳನ್ನು ನೀಡಿದ್ದಾರೆ.ಮೆಟ್ರೋ ಮೂರನೇ ಹಂತದ ಕಾಮಗಾರಿ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಅದರಲ್ಲಿ ಜೆಪಿ ನಗರದಿಂದ ಕೆಆರ್ ಪುರಂವರೆಗೆ ಮೆಟ್ರೋ ಕಾಮಗಾರಿ ಮಾಡುವುದಾಗಿ ಘೋಷಿಸಿದ್ದಾರೆ.ಇನ್ನು, ಬಿಎಂಟಿಸಿಗೆ ನೇರವಾಗಿ 100 ಕೋಟಿ ರೂ. ಸಹಾಯ ಧನ ನೀಡಲಾಗಿದೆ. ಅದಲ್ಲದೆ, ಬಿಎಂಟಿಸಿ ವತಿಯಿಂದ 80 ಇಲೆಕ್ಟ್ರಿಕ್ ಬಸ್ ಗಳನ್ನು ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.