ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಿಎಂ ಕುಮಾರಸ್ವಾಮಿ ಅವರೇ ಕಾರಣ- ಜಮೀರ್ ಅಹ್ಮದ್ ಖಾನ್ ಆರೋಪ

ಹುಬ್ಬಳ್ಳಿ, ಭಾನುವಾರ, 12 ಮೇ 2019 (16:21 IST)

ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಿಎಂ ಕುಮಾರಸ್ವಾಮಿ ಅವರೇ ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2008ರ ಮೊದಲು ರಾಜ್ಯದಲ್ಲಿ ಬಿಜೆಪಿ ಹೆಚ್ಚು ಹೆಸರು ಮಾಡಿರಲಿಲ್ಲ. ಆಗ ಕರ್ನಾಟಕದಲ್ಲಿ ಬಿಜೆಪಿಯವರಿಗೆ ಬೇಸ್ ಇರಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಅವರು ಮಾಡಿದ ತಪ್ಪು ನಿರ್ಧಾರವೇ ಕಾರಣವಾಯ್ತು. 2008 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಬಿಜೆಪಿಗೆ ಕುಮಾರಸ್ವಾಮಿ ಅವರು ಅಧಿಕಾರ ಬಿಟ್ಟು ಕೊಡಬೇಕಿತ್ತು, ಆದರೆ ಅಧಿಕಾರ ಬಿಟ್ಟು ಕೊಡದ ಕಾರಣ ರಾಜ್ಯದಲ್ಲಿ ಬಿಜೆಪಿ ಬೆಳೆಯಿತು  ಎಂದು ಹೇಳಿದ್ದಾರೆ.


ಮೈತ್ರಿ ಸರ್ಕಾರದಲ್ಲಿ 5 ವರ್ಷ ಸಂಪೂರ್ಣವಾಗಿ ಕುಮಾರಸ್ವಾಮಿ ಅವರು ಸಿಎಂ ಆಗಿರುತ್ತಾರೆ. 2022ರಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ 2022 ರಲ್ಲಿ ಚುನಾವಣೆ ನಿಲ್ಲದೇ ಇದ್ದರು ನಾವು ಬಿಡುವುದಿಲ್ಲ. ಅವರನ್ನು ನಾವು ಸಿಎಂ ಮಾಡುತ್ತೇವೆ ಎಂದು ಜಮೀರ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲೆಕ್ಷನ ಬಳಿಕ ಮಂಡ್ಯ ರೈತರು ಮಾಡಿದ್ದೇನು?

ಮೆಗಾಫೈಟ್ ಗೆ ವೇದಿಕೆಯಾಗಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಈಗ ಹೊಸ ಸಮಸ್ಯೆಗಳೇ ತಾಂಡವವಾಡುತ್ತಿವೆ.

news

ಬೈ ಎಲೆಕ್ಷನ್ ಗೆದ್ರೆ ಸರಕಾರ ನಮ್ಮದೇ ಎಂದ ಯಡಿಯೂರಪ್ಪ

ಕುಂದಗೋಳ ಹಾಗೂ ಚಿಂಚೋಳಿ ಬೈ ಎಲೆಕ್ಷನ್ ಗೆದ್ರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಹೀಗಂತ ...

news

ಸಿಎಂ ರೆಸಾರ್ಟ್ ವಾಸ್ತವ್ಯ; ಸಚಿವ ಡಿ.ಕೆ.ಶಿವಕುಮಾರ ಹೀಗ್ಯಾಕೆ ಹೇಳಿದ್ರು?

ಬಿಜೆಪಿ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವ ತಿರುಗೇಟು ನೀಡಿದ್ದಾರೆ.

news

ಯಡಿಯೂರಪ್ಪ ನಿತ್ಯ ಕನಸು ಕಾಣ್ತಿದ್ದಾರೆ; ಒಬ್ಬ ಶಾಸಕ ಅವ್ರ ಕೈಗೆ ಸಿಗಲ್ಲ

ಯಡಿಯೂರಪ್ಪ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳ್ತಾನೇ ಇದಾರೆ. ಪ್ರತಿದಿನ ಕನಸು ಕಾಣ್ತಿದಾರೆ. ಆದರೆ ನಮ್ಮ ...