ಮಂಡ್ಯ: ತಮ್ಮ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರೈತ ಜೈಕುಮಾರ್ ಸಾವಿಗೆ ಸಿಎಂ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.ಸಿಎಂ ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಭೇಟಿ ನೀಡುವ ದಿನವೇ ರೈತ ಜೈಕುಮಾರ್ ಮುಖ್ಯಮಂತ್ರಿಗಳ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜೈಕುಮಾರ್ ಕೃಷಿಯಲ್ಲೂ ನಷ್ಟ ಅನುಭವಿಸಿದ್ದ. ಹೀಗಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಇದನ್ನು ಭರಿಸಲಾಗದೇ, ಚಿಕಿತ್ಸೆಗೂ ಹಣ ಹೊಂದಿಸಲಾಗದೇ ಆತ್ಮಹತ್ಯೆ