ಬೆಂಗಳೂರು : ವಿದೇಶ ಪ್ರವಾಸ ಮುಗಿಸಿ ಇದೀಗ ಸಿಎಂ ಕುಮಾರಸ್ವಾಮಿ ತಮ್ಮ ಪತ್ನಿ ಹಾಗೂ ಪುತ್ರನ ಜೊತೆ ಇಂದು ರಾಜ್ಯಕ್ಕೆ ಮರಳಿದ್ದಾರೆ. ಸಿಎಂ ಕುಮಾರಸ್ವಾಮಿ 5 ದಿನಗಳ ಕಾಲ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರ್ ಜೊತೆ ಫ್ರಾನ್ಸ್ ಪ್ರವಾಸದಲ್ಲಿದ್ದರು. ಇಂದು ಪ್ರವಾಸ ಮುಗಿಸಿ ಬೆಳಗ್ಗೆ 9 ಗಂಟೆಗೆ ದುಬೈನಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ರಾಜ್ಯಕ್ಕೆ ಮರಳಿದ ಸಿಎಂಗೆ