ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದವರ್ಯಾರು ಗೊತ್ತಾ?

ಮಂಡ್ಯ, ಮಂಗಳವಾರ, 16 ಏಪ್ರಿಲ್ 2019 (09:33 IST)

: ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್ ನಗರದ ಬಾಚನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಸಾವಿನ ಕುರಿತ ಸಿ.ಎಂ ನೂರಕ್ಕೆ ನೂರರಷ್ಟು ಸುಳ್ಳು ಹೇಳಿದರೆ, ನಾನು ಏನು ಮಾಡಲಿ. ಕುಮಾರಸ್ವಾಮಿ ಅವರು ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ. ಬಹುಶಃ ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಕುಟುಂಬ ಸದಸ್ಯರನ್ನ ಕಳೆದುಕೊಂಡ ನೋವು ಅವರಿಗೆ ಗೊತ್ತಿಲ್ಲ. ಅವರಿಗೆ ಬರುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಅವರು ಕುಟುಂಬ ರಾಜಕಾರಣ ಮಾಡ್ತಿರೋದ್ರಿಂದ ಅವರ ಕಾರ್ಯಕರ್ತರು ನನಗೆ ನೀಡಿದ್ದಕ್ಕೆ ಸಿ.ಎಂ ಹಾಗೆ ಮಾತಾಡುತ್ತಿದ್ದಾರೆ. ಸಿಎಂ ಮಗನ ಪರ ಪ್ರಚಾರ ಮಾಡಲಿ. ನನ್ನಲ್ಲಿ ಲೋಪವಿದ್ದರೆ ಜನ ಹೇಳುತ್ತಾರೆ. ನಾನು ಸ್ಪರ್ಧೆ ಮಾಡ್ತಿರೋದು ನಿಖಿಲ್ ವಿರುದ್ಧವೋ ಅಥವಾ ಕುಮಾರಸ್ವಾಮಿ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಸ್ಲಿಂ, ಕ್ರಿಶ್ಚಿಯನ್ನರು ದೇಶಭಕ್ತರಲ್ಲವಾದ್ದರಿಂದ ಟಿಕೆಟ್ ಕೊಡಲ್ಲ: ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ: ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದೇಶಕ್ಕೆ ನಿಷ್ಠರಾಗಿಲ್ಲವಾದ್ದರಿಂದ ಬಿಜೆಪಿ ಪಕ್ಷದ ...

news

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವಿರೋಧಿ?

ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಿರುವ ಸಂದರ್ಭದಲ್ಲಿ ತಮಗೆ ಸಂಬಂಧವಿಲ್ಲ ವಿಷಯದ ಬಗ್ಗೆ ...

news

ನೆಹರು, ಇಂದಿರಾ ಸೇನೆ ಕಟ್ಟಿದಾಗ ಮೋದಿಗೆ ಪ್ಯಾಂಟ್‌ ಹಾಕೋದು ಗೊತ್ತಿರಲಿಲ್ಲ: ಕಮಲ್ ನಾಥ್

ಖಾಂಡ್ವಾ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಭಾರತೀಯ ಸೇನೆ ಕಟ್ಟುತ್ತಿರುವಾಗ ...

news

ರಾಹುಲ್ ಗಾಂಧಿ ವಿರುದ್ಧ ಅಶ್ಲೀಲ ಪದ ಬಳಸಿದ ಬಿಜೆಪಿ ರಾಜ್ಯಾಧ್ಯಕ್ಷ

ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ...