ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪ ವಿಧಾನಸಭೆಯಲ್ಲಿ ಆರಂಭಗೊಂಡಿದ್ದು, ಸಿಎಂ ಎಚ್ ಡಿ ಕುಮಾರಸ್ವಾಮಿ ವಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಸಿಎಂ ಕುಮಾರಸ್ವಾಮಿ ತಮ್ಮ ಮೇಲಿನ ತಾರತಮ್ಯ ಆರೋಪಕ್ಕೆ ತಿರುಗೇಟು ನೀಡಿದ್ದು ನಾನು ಯಾವುದೇ ಜಾತಿ, ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿಲ್ಲ ಎಂದಿದ್ದಾರೆ. ಸಿಎಂ ಹೀಗೆ ಹೇಳುತ್ತಿದ್ದಂತೇ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ನಾನು ಯಾವುದೋ ಒಂದು ಭಾಗಕ್ಕೆ ಮುಖ್ಯಮಂತ್ರಿಯಾಗಿಲ್ಲ. ಹಾಸನಕ್ಕೆ ರಿಂಗ್ ರೋಡ್ ನಿರ್ಮಿಸಲು 30 ಕೋಟಿ ರೂ. ಕೊಟ್ಟಿದ್ದೇನೆಂದರೆ ಆಕ್ಷೇಪ ವ್ಯಕ್ತಪಡಿಸುತ್ತೀರಿ.