ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

ಬೆಂಗಳೂರು, ಶುಕ್ರವಾರ, 12 ಏಪ್ರಿಲ್ 2019 (09:14 IST)

ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ವಿಡಿಯೋ ಒಂದನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ.


 
ಆದರೆ ಈ ವಿಡಿಯೋ ಸುಳ್ಳು, ಮತ್ತು ಬಿಜೆಪಿಯವರೇ ನನ್ನ ಇಮೇಜ್ ಹಾಳು ಮಾಡಲು ಎಡಿಟ್ ಮಾಡಿ ಹರಿಯಬಿಟ್ಟಿರುವ ವಿಡಿಯೋ ಎಂದು ಸಿಎಂ ಎಚ್ ಡಿಕೆ ಆರೋಪಿಸಿದ್ದಾರೆ.
 
ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಿಎಂ ಕುಮಾರಸ್ವಾಮಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುವ ವಿಡಿಯೋ ಪ್ರಕಟಿಸಿದ್ದು, ಇದರಲ್ಲಿ ಸಿಎಂ ‘ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ ಎಂದು ಯಾರು ಪರದಾಡುತ್ತಾರೋ ಅವರು ಹೋಗಿ ಬೇರೆ ದಾರಿಯಿಲ್ಲದೆ ಸೇನೆಗೆ ಸೇರುತ್ತಾರೆ. ಅಂತಹ ಯುವಕರ ಜೀವನದಲ್ಲಿ ಚೆಲ್ಲಾಟವಾಡುವ ಪ್ರಧಾನಿ ಇವರು’ ಎಂದು ಮೋದಿ ವಿರುದ್ಧ ಹರಿಹಾಯುತ್ತಾರೆ. ಈ ವಿಡಿಯೋ ಜತೆಗೆ ಬಿಜೆಪಿ ಮೊದಲು ನಿಮ್ಮ ಮಗನನ್ನು ಸೇನೆಗೆ ಸೇರಿಸಿ. ಆಗ ಸೇನೆಯವರ ಕಷ್ಟವೇನೆಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರ್ತಾರೆ ಎಂದ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ...

news

ಕಬ್ಬಿಗೆ ಬಿದ್ದ ಬೆಂಕಿ; ಬೆಳೆಗಾರ ಕಂಗಾಲು

ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ಆ ಬೆಳೆಗಾರನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.

news

ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎಂದ ಕಾಮುಕ ಪತಿ

ಅಹ್ಮದಾಬಾದ್: ಪ್ರತಿನಿತ್ಯ ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎನ್ನುತ್ತಿದ್ದ ಕಾಮುಕ ...

news

ಚುನಾವಣಾ ಪ್ರಚಾರದ ವೇಳೆ ಯುವನ ಕೆನ್ನೆಗೆ ಬಾರಿಸಿದ ನಟಿ ಖುಷ್ಪೂ. ಕಾರಣವೇನು ಗೊತ್ತಾ?

ಬೆಂಗಳೂರು : ನಟಿ ಖುಷ್ಪೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿದ ವೇಳೆ ಯುವಕನೊಬ್ಬನ ...