ಬೆಂಗಳೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಲು ಬಸ್ ಮೂಲಕ ಪ್ರಯಾಣಿಸುವಾಗ ದಾರಿ ಮಧ್ಯೆಯೇ ಸಿಎಂ ಕುಮಾರಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ. ಸಿಎಂ ಪ್ರಯಾಣಿಸುತ್ತಿದ್ದ ಬಸ್ ಸುತ್ತ ಸುತ್ತುವರಿದ ವಿದ್ಯಾರ್ಥಿನಿಯರ ಪೈಕಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಮ್ಮ ಶಾಲೆಯ ಸಂಕಷ್ಟಗಳ ಬಗ್ಗೆ ಅಹವಾಲು ನೀಡಿದ್ದಾಳೆ. ಶಿಕ್ಷಕರ ಕೊರತೆ, ಹಾಸ್ಟೆಲ್ ಕೊರತೆ ಬಗ್ಗೆ ಮನದಟ್ಟು ಮಾಡಿದ್ದಾಳೆ.ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ತಕ್ಷಣವೇ ಹಾಸ್ಟೆಲ್ ಕಟ್ಟಿಸಿಕೊಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಅಲ್ಲದೆ, ಶಿಕ್ಷಕರ ಕೊರತೆ ನೀಗಿಸಲೂ