ಹಾಸನ : ಭಾರತೀಯ ಸೇನೆಯ ಏರ್ ಸ್ಟ್ರೈಕ್ ಬಗ್ಗೆ ಬಿಜೆಪಿಯವರು ಸಂಭ್ರಮಿಸುವುದನ್ನು ಕಂಡು ಸಿಎಂ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಿಮಿತ್ತ ಹಾಸನ ಜಿಲ್ಲೆ ಅರಸೀಕೆರೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣ ಕುರಿತು ಪ್ರಸ್ತಾಪಿಸಿ, ಇದು ಇಂದಿಗೆ ಮುಗಿಯುವ ಲಕ್ಷಣ ಇಲ್ಲ. ಆದ್ರೆ ಬಿಜೆಪಿಯ ಹಲವು ನಾಯಕರು, ನಾವೇ ಯುದ್ಧ ಮಾಡಿ ಉಗ್ರರನ್ನು ಸದೆ ಬಡಿದಿದ್ದೇವೆ ಎಂಬಂತೆ