ಸುಬ್ರಹ್ಮಣ್ಯನಿಗೆ ಬಂಗಾರದ ರಥ ನೀಡಲು ಮುಂದಾದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಭಾನುವಾರ, 28 ಏಪ್ರಿಲ್ 2019 (08:57 IST)

ಬೆಂಗಳೂರು : ಸಿಎಂ ಕುಮಾರಸ್ವಾಮಿ ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ಮುಂದಾಗಿದ್ದಾರೆ.

15 ವರ್ಷಗಳ ಹಿಂದೆ ಧರಂ ಸಿಂಗ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಕುಕ್ಕೆಗೆ ಚಿನ್ನದ ರಥ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅವತ್ತು ಸುಬ್ರಹ್ಮಣ್ಯನಿಗೆ ಹೇಳಿದ ಹರಕೆ ಇದುವರೆಗೂ ಪೂರ್ಣಗೊಂಡಿಲ್ಲ.ಈ ಹರಕೆಯನ್ನು ಈಡೇರಿಸಿಲ್ಲ ಅಂದರೆ ಸುಬ್ರಹ್ಮಣ್ಯನ ಶಾಪ ತಟ್ಟುತ್ತದೆ. ಸಿಎಂ ಸ್ಥಾನದಲ್ಲಿ ಇರುವವರು ಇದನ್ನು ನೆರವೇರಿಸಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಹರಕೆಯನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ಜ್ಯೋತಿಷಿ ದ್ವಾರಕನಾಥ್ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು.

 

ಈ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ  ನೆಮ್ಮದಿಯಾಗಿ  ಸರ್ಕಾರ ನಡೆಸಲು ಹಾಗೂ ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಇದೀಗ ಸುಬ್ರಹ್ಮಣ್ಯನಿಗೆ ಇನ್ನೂರು ಕೋಟಿ ರೂಪಾಯಿ ಮೊತ್ತದ ಚಿನ್ನದ ರಥ ಮಾಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಪಿಜ್ಜಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಅಮೇರಿಕಾ : ಒಂದು ಪಿಜ್ಜಾಗೆ ಹೆಚ್ಚೆಂದರೆ ಸಾವಿರಾರು ರೂಪಾಯಿ ಇರಬಹುದು. ಆದರೆ ಈ ಪಿಜ್ಜಾದ ಬೆಲೆ ಕೇಳಿದ್ರೆ ...

news

ಇಂಟರ್ನ್ ಶಿಪ್ ಗೆಂದು ಬಂದ ಎಲ್‍.ಎಲ್‍.ಬಿ. ವಿದ್ಯಾರ್ಥಿನಿಗೆ ವಕೀಲ ಮಾಡಿದ್ದೇನು ಗೊತ್ತಾ?

ಹೈದರಾಬಾದ್ : ಇಂಟರ್ನ್ ಶಿಪ್ ಮಾಡಲೆಂದು ಬಂದ ಎಲ್‍.ಎಲ್‍.ಬಿ. ವಿದ್ಯಾರ್ಥಿನಿಯ ಮೇಲೆ ವಕೀಲನೊಬ್ಬ ಅತ್ಯಾಚಾರ ...

news

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ

ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೇಯ ಕುಡಿ ರಾಜಕಿಯಕ್ಕೆ ಎಂಟ್ರಿ ...

news

ಸ್ಕಾರ್ಫ್ ಹಾಕಿಕೊಂಡ ಹುಡುಗಿ ಮಾಡಿದ ವಿವಾದ ಏನು?

ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡ ಬಂದ ವಿದ್ಯಾರ್ಥಿನಿಯೊಬ್ಬಳು ಮತ್ತೆ ವಿವಾದ ಹುಟ್ಟುಹಾಕಿದ್ದಾಳೆ.