Widgets Magazine

ಪಂಚಮಸಾಲಿ ಮಠದ ಸ್ವಾಮೀಜಿಗಳ ವಿರುದ್ಧ ಗರಂ ಆದ ಸಿಎಂ. ಕಾರಣವೇನು ಗೊತ್ತಾ?

ದಾವಣಗೆರೆ| pavithra| Last Modified ಬುಧವಾರ, 15 ಜನವರಿ 2020 (06:53 IST)
ದಾವಣಗೆರೆ : ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದರಲ್ಲಿ ಅವರು  ಪಂಚಮಸಾಲಿ ಮಠದ ಸ್ವಾಮೀಜಿಗಳ ವಿರುದ್ಧ ಗರಂ ಆಗಿದ್ದಾರೆ.ಪಂಚಮಸಾಲಿ ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ವಚನಾನಂದ ಸ್ವಾಮಿಗಳು, ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಮೂರು ಜನ ಸಚಿವರನ್ನಾಗಿ ಮಾಡಬೇಕು. ಪ್ರಾಶಸ್ತ್ಯವನ್ನು ಮುರುಗೇಶ್ ನಿರಾಣಿಗೆ ಕೊಡಬೇಕು. ಇಲ್ಲದಿದ್ದರೆ ಸಮಾಜ ನಿಮ್ಮನ್ನ ಕೈ ಬಿಡುತ್ತದೆ ಎಂದು ಹೇಳಿದ್ದಾರೆ.


ಇದರಿಂದ ಕೆಂಡಾಮಂಡಲರಾದ ಸಿಎಂ, ಎಲ್ಲಾ ಸಮಾಜದ ಶ್ರೀಗಳು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು. 17 ಶಾಸಕರು ರಾಜೀನಾಮೆ ನೀಡಿ ವನವಾಸ ಅನುಭವಿಸಿದ್ದಾರೆ. ಅವರಿಗೆ ನೀಡಬೇಕಾಗಿದೆ. ನನಗೆ ಅಧಿಕಾರದ ಆಸೆ ಇಲ್ಲ. ಬೇಕಿದ್ದರೆ ರಾಜೀನಾಮೆ ಕೊಟ್ಟು ಬರುತ್ತೇನೆ. 17 ಶಾಸಕರ ಋಣ ತೀರಿಸಬೇಕಿದೆ ಎಂದು ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :