ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಆಫರ್ ನೀಡಿದ ಸಿಎಂ?

ಬೆಂಗಳೂರು, ಗುರುವಾರ, 25 ಏಪ್ರಿಲ್ 2019 (16:03 IST)

ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಬೆನ್ನಲ್ಲೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ತೀವ್ರಗೊಂಡಿದೆ.
ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಖುದ್ದು ಕೈ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿಯನ್ನ ಕರೆಸಿಕೊಂಡು ಮಾತನಾಡಿದ್ದಾರೆ.

ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಸುದೀರ್ಘ ಚರ್ಚೆ ನಡಸಿರುವ ಸಿಎಂ ಕುಮಾರಸ್ವಾಮಿ, ಸುಮಾರು ಒಂದೂವರೆ ತಾಸು ರಮೇಶ್ ಜೊತೆ ಮಾತುಕತೆ ನಡೆಸಿದ್ರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಡಳಿತ ನಡೆಸುತ್ತಿದ್ದೇನೆ. ಯಾರನ್ನೂ ನಾನು ಕಡೆಗಣಿಸುತ್ತಿಲ್ಲ. ನಿಮ್ಮ ಯಾವುದೇ ಸಮಸ್ಯಗಳಿದ್ದರೂ ನಾನೇ ಖುದ್ದು ನಿಂತು ಬಗೆಹರಿಸುತ್ತೇನೆ ಎಂದರು.

ನಮ್ಮ ಪಕ್ಷದ ಕೋಟಾದಲ್ಲೇ ನಿಮಗೆ ಸಚಿವ ಸ್ಥಾನವನ್ನೂ ಕೊಡುತ್ತೇವೆ. ನಿಮ್ಮ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಕಟಿ ಬದ್ಧವಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಇರಲು ಆಗದಿದ್ದಲ್ಲಿ ಜೆಡಿಎಸ್‌ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ನಿಮ್ಮನ್ನ ಗೌರವದಿಂದ ನೋಡಿಕೊಳ್ತೇವೆ.

ಬೇಕಿದಲ್ಲಿ ನಿಮ್ಮ ಹೈಕಮಾಂಡ್ ಜೊತೆ ನಾನೂ ಚರ್ಚೆ ನಡೆಸುತ್ತೇನೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಿರಿ. ರಾಜೀನಾಮೆ ನಿರ್ಧಾರ ಕೈಬಿಡುವಂತೆ ರಮೇಶ್ ಮನವೊಲಿಕೆ ಯತ್ನವನ್ನು ಸಿಎಂ ನಡೆಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಮೇಶ್ ಜಾರಕಿಹೊಳಿದು ಕೇವಲ ಡೆಡ್ಲೈನ್ ಅಷ್ಟೇ ಅಂತೆ...

ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರ ಕೇವಲ ಡೆಡ್ ಲೈನ್ ಅಷ್ಟೇ. ಹಿಂದೆ ಕೊಟ್ಟಂತೆ ಈಗಲೂ ಇನ್ನೊಂದು ಡೆಡ್ ...

news

ರಾಜೀನಾಮೆ ಕೊಡೋದೇ ಇಲ್ಲ ಎಂದ ಕೈ ಶಾಸಕ ಯಾರು?

ಆಪರೇಷನ್ ಕಮಲ ಸದ್ದು ತೆರೆಮರೆಯಲ್ಲಿ ಕೇಳಿಬರುತ್ತಿವಂತೆಯೇ ಇತ್ತ, ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಸಿ ...

news

ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಗಳು ಯಾರು ಯಾರು?

ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಸಂಭಾವ್ಯ ಅಭ್ಯರ್ಥಿಗಳ ...

news

ಹೆಚ್ಚಿನ ಬಡ್ಡಿ ಆಮಿಷ: ದುಡ್ಡು ಕೊಟ್ಟ ಜನರಿಗೆ ಮಕ್ಮಲ್ ಟೋಪಿ

ಹೆಚ್ಚಿನ ಬಡ್ಡಿ ಹಣ ನೀಡುವುದಾಗಿ ಹೇಳಿ ಗ್ರಾಹಕರಿಗೆ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.