ಮುಷ್ಕರ ಹಿಂಪಡೆಯಲು ಸಾರಿಗೆ ನೌಕರರಲ್ಲಿ ಸಿಎಂ ಮನವಿ

ಬೆಂಗಳೂರು| pavithra| Last Modified ಶುಕ್ರವಾರ, 11 ಡಿಸೆಂಬರ್ 2020 (10:24 IST)
ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುಷ್ಕರ ಹಿಂಪಡೆಯಲು ಸಾರಿಗೆ ನೌಕರರಲ್ಲಿ ಸಿಎಂ ಮನವಿ ಮಾಡಿದ್ದಾರೆ.

ಕೊವಿಡ್ ಹಿನ್ನಲೆ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಹೇಳಿದ್ದಾರೆ.

ಆದರೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ ಸಾರಿಗೆ ನೌಕರರು, ಮಧ್ಯಾಹ್ನ 12 ಗಂಟೆಗೆಯೊಳಗೆ ಸರ್ಕಾರ ಸ್ಪಂದಿಸಬೇಕು. ಸ್ಪಂದಿಸದಿದ್ದರೆ ನಾವು ಡಿಪೋಗಳನ್ನು ಬಿಟ್ಟು ಫ್ರೀಡಂಪಾರ್ಕ್ ಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಬಿಎಂಟಿಸಿ ಸಿಬ್ಬಂದಿ ವಾರ್ನಿಂಗ್ ನೀಡಿದ್ದಾರೆ.    ಇದರಲ್ಲಿ ಇನ್ನಷ್ಟು ಓದಿ :