ಬಿಜೆಪಿ ರಾಜಕೀಯ ಉದ್ದೇಶದಿಂದ ಬೈಕ್ ಜಾಥಾ ಹಮ್ಮಿಕೊಂಡಿದೆ. ಇದೀಗ ತಾನೆ ಶಾಂತಿ ನೆಲೆಸುತ್ತಿರುವ ಮಂಗಳೂರಿನಲ್ಲಿ ಶಾಂತಿ ಕದಡಲು ಬಿಜೆಪಿ ಮುಂದಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿಗೆ ಹೋಗಿ ಸಭೆ ಮಾಡಲಿ, ಪಾದಯಾತ್ರೆ ಮೂಲಕ ತೆರಳಲಿ, ಅದನ್ನ ಬಿಟ್ಟು ಇಲ್ಲಿಂದಲೇ ಬೈಕ್ ರ್ಯಾಲಿ ಹೊರಡುವ ಅಗತ್ಯವೇನಿತ್ತು..? 10-15 ಸಾವಿರ ಬೈಕ್`ಗಳು ಹೊರಟರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರ ಜೊತೆಗೆ ದಾರಿ ಮಧ್ಯೆ, ದುಷ್ಕರ್ಮಿಗಳು ಸಹ ಸೇರಿಕೊಳ್ಳುವ ಸಾಧ್ಯತೆ