ಪುತ್ರ ಡಾ.ಯತೀಂದ್ರ ಮತ್ತು ಸುನೀಲ್ ಭೋಸ್ಗೆ ಟಿಕೆಟ್ ನೀಡುವ ಕುರಿತಂತೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ನಾನು ವರುಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಸಚಿವ ಮಹಾದೇವಪ್ಪ ಟೀ ನರಸೀಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅದೆಲ್ಲಾ ಆಮೇಲೆ ನೋಡೋಣ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಸಚಿವ ಮಹಾದೇವಪ್ಪ ಪುತ್ರ ಸುನೀಲ್ ಭೋಸ್ ಅವರಿಗೆ ಟಿಕೆಟ್ ವಿಚಾರ ಕುರಿತಂತೆ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.