ಸಿಎಂ ಸಿದ್ದರಾಮಯ್ಯ ಧರ್ಮವನ್ನು ಒಡೆದು ಆಳುತ್ತಿದ್ದು ಅವರು ಬ್ರಿಟೀಷರಿಗಿಂತ ಕಡಿಮೆಯಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಬ್ರಿಟೀಷರು ದೇಶವನ್ನು ಛಿದ್ರ ಛಿದ್ರಗೊಳಿಸಿದಂತೆ, ಸಿಎಂ ಸಿದ್ದರಾಮಯ್ಯ ಕೂಡಾ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ವೀರಶೈವ ಮತ್ತು ಲಿಂಗಾಯುತ ವಿವಾದದಲ್ಲಿ ಅನಗತ್ಯವಾಗಿ ಸರಕಾರ ಮೂಗು ತೂರಿಸುತ್ತಿದೆ. ವೀರಶೈವ ಮತ್ತು ಲಿಂಗಾಯುತ ನಾಯಕರು ಪ್ರತ್ಯೇಕ ಧರ್ಮ ಕುರಿತಂತೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಸರಕಾರದ ಹಸ್ತಕ್ಷೇಪ