ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಈ ಕ್ಷಣದಲ್ಲಿ ಹೇಳಿದರೆ, ಸಿದ್ಧರಾಮಯ್ಯ ಒಂದು ಕ್ಷಣವೇ ಕಾಂಗ್ರೆಸ್ ನಲ್ಲಿ ಇರುವುದಿಲ್ಲ. ಸಿದ್ಧರಾಮಯ್ಯ ಒಬ್ಬ ಅವಕಾಶವಾದಿ, ರಾಜಕಾರಣಿ ಎಂದು ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಕೆ.ಎಸ್. ಈಶ್ವರಪ್ಪ ಭಾಗಿಯಾಗಿ ಹೇಳಿಕೆ ನೀಡಿ, ನರೇಂದ್ರ ಮೋದಿ ಒಬ್ಬ ರಾಷ್ಟ್ರವಾದಿ, ಆದರೆ, ಚಾಮುಂಡೇಶ್ವರಿ ಜೊತೆಗೆ ಬಾದಾಮಿ ಕ್ಷೇತ್ರವನ್ನು ಹಠ ಮಾಡಿ ಪಡೆದ ಸಿದ್ಧರಾಮಯ್ಯ ಜಾತಿವಾದಿ ಯಾಗಿದ್ದಾರೆ. ರಾಜಕೀಯದಲ್ಲಿ ದ್ವೇಷ ಸಾಧಿಸುವುದು ಒಳ್ಳೆಯದಲ್ಲ.