ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣ, ಅಧಿಕಾರದ ಮದ ಹೆಚ್ಚಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿಯೂ ಸಿಎಂ ನಾನೇ ಎನ್ನುತ್ತಿದ್ದಾರೆ. ಆದರೆ, ಜನತೆ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕುರಬರಿಗೆ ಮತಹಾಕಬೇಡ ಎನ್ನಲು ಸಿಎಂ ಸಿದ್ದರಾಮಯ್ಯನವರಿಗೆ ಏನು ಹಕ್ಕಿದೆ. ಯಾರಿಗೆ ಮತಹಾಕಬೇಕು ಎನ್ನುವ ಬಗ್ಗೆ ಕುರುಬ ಜನಾಂಗ ಜ್ಞಾನ ಹೊಂದಿದೆ. ಇವರ ಹೇಳಿಕೆಗಳಿಗೆಲ್ಲಾ ಯಾರು ಮಣೆ