ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ, ಯಡಿಯೂರಪ್ಪನವರ ವಿರುದ್ಧ ಸಿಎಂ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಡೆ ಸ್ಲಂ ಕಡೆಗೆ ಅಂತಾರೆ, 20 ವರ್ಷಗಳಿಂದ ಸ್ಲಂ ನೋಡಿರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ತಿಂದು ಬರ್ತಾರೆ. ದಲಿತರ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ದಲಿತರ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆಯ ಹೆಣ್ಣುಮಕ್ಕಳನ್ನ ಕೊಟ್ಟು ಮದುವೆ ಮಾಡಿ