ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ರನ್ನು ಬಿಜೆಪಿ ನಾಯಕರು ಕೊಲೆಗಡುಕ ಎಂದರೂ ಸುಮ್ಮನಿರಬೇಕಾ ಎಂದು ಸಿಎಂ ಸಿದ್ದರಾಮಯ್ಯ ಏರು ಧ್ವನಿಯಲ್ಲಿ ಗುಡುಗಿದ್ದಾರೆ. ಅಧಿವೇಶನದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಜಾರ್ಜ್ರನ್ನು ಕೊಲೆಗಡುಕ ಎಂದು ಹೇಳಿದೆಯಾ? ಹೇಳಿಲ್ಲ ಅಂದ ಮೇಲೆ ಬಿಜೆಪಿ ನಾಯಕರು ಯಾಕೆ ಅಂತಹ ಪದವನ್ನು ಬಳಕೆ ಮಾಡುವುದು ಎಂದು ಕಿಡಿಕಾರಿದ್ದಾರೆ. ನಿಲುವಳಿ ಸೂಚನೆಗೆ ಇದು ಯೋಗ್ಯ ವಿಷಯವಲ್ಲ. ನಿಯಮಗಳ ಪ್ರಕಾರವು ಇದು ಚರ್ಚೆಗೆ ತಕ್ಕ ವಿಷಯವಲ್ಲ. ಅಧಿಕಾರದಲ್ಲಿರುವ ಅನೇಕ ರಾಜಕಾರಣಿಗಳ