ಬೆಂಗಳೂರು: ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದ ಹೆಲಿಕಾಪ್ಟರ್ ದಾರಿ ತಪ್ಪಿ ಒಂದು ಕಡೆ ಲ್ಯಾಂಡ್ ಆಗಬೇಕಾಗಿದ್ದುದು, ಇನ್ನೊಂದು ಕಡೆ ಲ್ಯಾಂಡ್ ಆದ ಘಟನೆ ಇಂದು ನಡೆದಿದೆ.ಕೊಪ್ಪಳದಿಂದ ಬರುತ್ತಿದ್ದ ಸಿಎಂ ಪ್ರಯಾಣಿಸುತ್ತಿದ್ದ ಕಾಪ್ಟರ್ ತೊಂಡಿಹಾಳದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅದರ ಬದಲು 35 ಕಿ.ಮೀ. ದೂರದ ಲಿಂಗಸೂರಿನಲ್ಲಿ ಲ್ಯಾಂಡ್ ಆಗಿದೆ. ಪೈಲಟ್ ಅಚಾತುರ್ಯದಿಂದಾಗಿ ಈ ಘಟನೆ ನಡೆದಿದೆ. 11.15 ಕ್ಕೆ ಲ್ಯಾಂಡ್ ಆಗಬೇಕಿದ್ದ ಕಾಪ್ಟರ್ ಇನ್ನೂ ಬಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ವಿಚಾರಿಸಿದಾಗ ಅಚಾತುರ್ಯದಿಂದಾಗಿ