ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯಗೆ ಪ್ರಚಾರದ ನಡುವೆ ತೀರಿಕೊಂಡ ಪುತ್ರ ರಾಕೇಶ್ ನೆನಪಾಗಿದ್ದಾರೆ.ಖಾಯಿಲೆಗೆ ತುತ್ತಾಗಿದ್ದ ರಾಕೇಶ್ ಸಿದ್ದರಾಮಯ್ಯ 2016 ರಲ್ಲಿ ತೀರಿಕೊಂಡಿದ್ದರು. ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ರಾಕೇಶ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.ಇದೀಗ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಪುತ್ರನ ನೆನೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಕೇಶ್ ಯಾಕೋ ನನಗೆ ಪದೇ ಪದೇ ನೆನಪಾಗುತ್ತಿದ್ದಾನೆ. ಅವನು ಇದ್ದಿದ್ದರೆ ಚಾಮುಂಡೇಶ್ವರಿಯಲ್ಲಿ ನಾನು ಪ್ರಚಾರಕ್ಕೇ ಬರಬೇಕಾಗಿರಲಿಲ್ಲ.