ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಕಂಠೀರವ ಸ್ಟೇಡಿಯಂನಲ್ಲಿ ಮೇಲ್ದರ್ಜೆಗೇರಿಸಿದ್ದ ಒಳಾಂಗಣ ಮೈದಾನವನ್ನು ಉದ್ಘಾಟಿಸಿದರು. ತಮ್ಮ ಸಹೋದ್ಯೋಗಿಗಳ ಜತೆ ಆಗಮಿಸಿದ ಸಿಎಂ ಬಾಸ್ಕೆಟ್ ಬಾಲ್ ಆಡಲು ಹೋಗಿ ಪೆಚ್ಚಾದ ಘಟನೆಯೂ ನಡೆಯಿತು. ಸಿಎಂ ಸಿದ್ದರಾಮಯ್ಯ ಅತ್ಯುತ್ಸಾಹದಿಂದ ಕೈಯಲ್ಲಿ ಬಾಲ್ ಹಿಡಿದುಕೊಂಡು ಕುಣಿಕೆಯೊಳಗೆ ಬಾಲ್ ತಳ್ಳಲು ಯತ್ನಿಸಿದರೂ ಅದು ಹೋಗಲಿಲ್ಲ. ಹಲವು ಬಾರಿ ಪ್ರಯತ್ನಿಸಿ ವಿಫಲರಾದಾಗ ಅಲ್ಲಿ ನೆರೆದಿದ್ದ ಮಕ್ಕಳು ಕೋಚ್ ಸಹಾಯ ತಗೊಳ್ಳಿ ಸಾರ್ ಎಂದು ಕಿಚಾಯಿಸಿದರು.ಮೊದಲೇ ಬಾಲ್ ಹಾಕಲಾಗದ