ಮಂಗಳೂರು: ಮಧ್ಯಾಹ್ನ ಮಾಂಸದೂಟ ಮಾಡಿ ಸಂಜೆ ದ.ಕ. ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನಡೆ ಇದೀಗ ವಿವಾದಕ್ಕೀಡಾಗಿದೆ. ಭಾನುವಾರ ಬಂಟ್ವಾಳದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಾದ ಸಚಿವ ಖಾದರ್, ರಮಾನಾಥ್ ರೈ ಮೊದಲಾದವರ ಜತೆ ಮೀನಿನ ಖಾದ್ಯ ಸೇವಿಸಿದ್ದರು. ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.ಇದರ ಬಗ್ಗೆ ವಿವಾದ ಹೊತ್ತಿಕೊಂಡಿದೆ. ಮಾಂಸದೂಟ ಸೇವಿಸಿ ಸಿಎಂ ದೇವಾಲಯ ಪ್ರವೇಶಿಸಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.